Wednesday, April 14, 2010

ಬಿಸಿಲೆ ಎಂಬ ಸುಂದರ ತಾಣ





ಪ್ರಾಕೃತಿಕ ಸಂಪತ್ತನ್ನು ಹೊದ್ದು ಹಾಸಿ ಮಲಗಿರುವಂತಹ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಕಲೇಶಪುರ ತಾಲ್ಲೂಕು ಬಹಳ ಪ್ರಮುಖವಾದುದು. ಈ ತಾಲ್ಲೂಕಿನಲ್ಲಿ ಪ್ರಾವಾಸಿಗರು ನೋಡಬಹುದಾದಂತಹ ಹಲವಾರು ತಾಣಗಳು ಸಿಗುತ್ತವೆ, ಅಪರೂಪದ ಸಸ್ಯ ಸಂಪತ್ತಿದೆ, ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳಿವೆ. ಕಾಫಿ, ಏಲಕ್ಕಿ ತೋಟಗಳು ಹಸಿರಿನಿಂದ ಕಂಗೊಳಿಸುವ ಗದ್ದೆಗಳ ಸಾಲು, ಅಲ್ಲಲ್ಲಿ ಹರಿಯುವ ಜರಿ, ತೊರೆಗಳು, ಬೆಟ್ಟ ಗುಡ್ದಗಳು ನಿಮ್ಮನ್ನು ಕೈ ಬೀಸಿ ಸ್ವಾಗತಿಸುತ್ತವೆ. ಇಂತಹ ಮಲೆನಾಡಿನಲ್ಲಿ ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ ಬಿಸಿಲೆ ಎಂಬ ಸುಂದರ ತಾಣವೂ ಇದೆ.

ಬಿಸಿಲೆ ಸಕಲೇಶವುರದಿಂದ ಸುಮಾರು ೫೦ ಕಿ.ಮಿ. ದೂರದಲ್ಲಿದೆ. ಇದು ಅಪರೂಪದ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲಗಳನ್ನು ಹೊಂದಿರುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವಂತಹ ಪ್ರದೇಶವಾಗಿದ್ದು ಪ್ರಕೃತಿ ಪ್ರಿಯರಿಗೆ,ಸುಮಾರು 3640 ಹೆಕ್ಟೇರ್ ನಷ್ಟು ವಿಸ್ತಾರವಾದ ಕಾಡನ್ನು ಹೊಂದಿದ್ದು ಸುತ್ತಲೂ ಕುಮಾರಧಾರ ಪರ್ವತ , ಪಟ್ಲ ಬೆಟ್ಟ ಹಾಗೂ ಇತರ ಬೆಟ್ಟಗಳನ್ನು ಏಕ ಕಾಲದಲ್ಲಿ ವಿಕ್ಷಿಸಬಹುದಾದ ಸುಂದರ ರಮಣೀಯ ಸ್ತಳವಾಗಿದೆ,
ಮಾಡಿಸಿದಂತಹ ಸ್ಥಳವಾಗಿದ್ದು ಇಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಅರಣ್ಯ ಇಲಾಖೆಯ ವತಿಯಿಂದ ಅನುಕೂಲ ಮಾಡಿದ್ದು ಮೇಲಿನಿಂದ ನಿಂತು ಸುಮಾರು ೫೦೦೦ ಅಡಿಗಳ ಆಳದಲ್ಲಿ ಇರುವಂತಹ ವನಗಳ ರಾಶಿಯ ಸೊಬಗನ್ನು ಅದರ ಮಧ್ಯದಲ್ಲಿ ದುಮ್ಮಿಕ್ಕಿ ಹರಿಯುವ ನದಿಯನ್ನೂ ಸುತ್ತ ಮುತ್ತಲಿನ ಬೆಟ್ಟಗಳನ್ನೂ (ಕುಮಾರದಾರ ಪರ್ವತ ಅಥವಾ ಪುಷ್ಪಗಿರಿ ಪರ್ವತವನ್ನೂ) ಚಲಿಸುವ ಮೋಡಗಳನ್ನೂ, ಸಂಜೆಯ ಹೊತ್ತಿನಲ್ಲಿ ಸೂರ್ಯಸ್ಥವನ್ನು ನೋಡಲು ಎಂತಹವರಿಗೂ ಆನಂದವಾಗುತ್ತದೆ. ಇದನ್ನು ಬರವಣಿಗೆಯಲ್ಲಿ ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು. ಇಲ್ಲಿ ಮಳೆಗಾಳದಲ್ಲಿ ಧಾರಕಾರವಾಗಿ ಸುರಿಯುವ ಮಳೆಯನ್ನು ಹಾಗೂ ಸಂಪೂರ್ಣವಾಗಿ ಮಂಜಿನಿಂದ ಆವೃತ್ತವಾದ ಪ್ರದೇಶಗಳನ್ನು ನೋಡುವುದೇ ಆನಂದ.ಇಲ್ಲಿಂದ ಮುಂದೆ ಸುಮಾರು ೨೦ ಕಿ.ಮೀ. ಕ್ರಮಿಸಿದರೆ ಕುಕ್ಕೆ ಸುಬ್ರಹ್ಮಣ್ಯ ಸಿಗುತ್ತದೆ, ಚಾರ್ಮುಡಿ ಘಾಟಿಯಂತೆ ಬಿಸಿಲೆ ಘಾಟಿಯೂ ದುರ್ಗಮವಾದ ರಸ್ತೆಯಾಗಿದ್ದು ಹಲವಾರು ಮೈ ನವಿರೇಳಿಸುವ ತಿರುವುಗಳನ್ನು ಒಳಗೊಂಡಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವುದೇ ಅನುಭವ.ಇಲ್ಲಿಗೆ ಸಕಲೇಶಪುರದಿಂದ ಹೆತ್ತೂರು, ವನಗೂರು ಕೂಡುರಸ್ತೆಯ ಮಾರ್ಗವಾಗಿ ಹೋಗಬೇಕಾಗುತ್ತದೆ. ವಾಸ್ತವ್ಯಕ್ಕೆ ವನಗೂರು-ಕೂಡುರಸ್ತಯಲ್ಲೇ ಎಲ್ಲಾ ರೀತಿಯ ಸೌಕರ್ಯವಿರುವಂತಹ ಖಾಸಗಿ ವಸತಿಗೃಹವಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಬಹುದಾಗಿದೆ.
ದರ ಸುತ್ತ ಮುತ್ತ ಹಲವಾರು ನೋಡುವಂತಹ ಸ್ಥಳಗಳಿದ್ದು ವನಗೂರು-ಕೂಡರಸ್ತೆಯಿಂದ ಗೈಡ್ ನ ಸಹಾಯವನ್ನು ಪಡೆದು ಮಲ್ಲಹಳ್ಳಿ ಜಲಪಾತ, ಕಾಗಿನಹರೆ, ಪಟ್ಲ ಬೆಟ್ಟ , ಮುಕನಮನೆ ಫಾಲ್ಸ್, ಗವಿ ಬೆಟ್ಟ ಮುಂತಾದ ಸ್ಥಳಗಳನ್ನು ವೀಕ್ಷೀಸಬಹುದಾಗಿದೆ. ಇಲ್ಲಿಗೆ ಸ್ವಂತ ವಾಹನದಲ್ಲಿ ಪ್ರವಾಸ ಕೈಗೊಂಡರೆ ಉತ್ತಮ ಸಾಧ್ಯವಾಗದಿದ್ದರೆ ವನಗೂರು-ಕೂಡರಸ್ತೆವರೆಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಆಗಮಿಸಿ ಅಲ್ಲಿಂದ ಜೀಪ್ ಅಥವಾ ಕಾರನ್ನುಬಾಡಿಗೆ ಪಡೆದು ಪ್ರವಾಸ ಕೈಗೊಳ್ಳಬಹುದು
.
ಪ್ರಿಯರಿಗೆ ಟ್ರಕ್ಕಿಂಗ್ ಮಾನ್ಸೂನ್ ಟ್ರಕ್ಕಿಂಗ್ ಮಾಡಲು ಹೇಳತಹ ಸ್ಥಳವಾಗಿದ್ದು ಪ್ರಾಕೃತಿಕ ಸೌಂದರ್ಯವನ್ನು ಎಷ್ಟು ಬೇಕೂ ಅಷ್ಟು ಸವಿಯಬಹುದು. ಸಾಧ್ಯವಾದರೆ ಗೆಳೆಯರೊಂದಿಗೆ ಅಥವಾ ನಿಮ್ಮ ಕುಟುಂಬದೊಂದಿಗೆ ಮನಸ್ಸಿನಲ್ಲಿರುವ ಜಂಜಡಗಳನ್ನು ಮರೆತು ವಾರಾಂತ್ಯವನ್ನು ಈ ಸುಂದರ ತಾಣದಲ್ಲಿ ಕಳೆಯಿರಿ.

No comments:

Post a Comment